PROPERTY TAXES MAY BE HIKED BY 15% IN BANGALORE – STANDING COMMITTEE PROPOSAL


The Debt ridden BBMP may not be able to sustain and provide civic amenities, may resort to hike the property taxes to meet the ever increasing expenditure and the only way is to generate more revenue by increasing the slab by 15%. 

A NEWS REPORT

ಬೆಂಗಳೂರು: ಬಿಬಿಎಂಪಿ ಆಡಳಿತ ಆಸ್ತಿ ತೆರಿಗೆ ಏರಿಕೆ ಮಾಡಲು ನಿರ್ಧರಿಸಿದ್ದು, ಜನತೆಗೆ ಶಾಕ್ ನೀಡಲು ಮುಂದಾಗಿದೆ.

ಆರ್ಥಿಕಸಂಕಷ್ಟ ಹಾಗೂ ಕಳೆದ 6 ವರ್ಷಗಳಿಂದ ತೆರಿಗೆ ಪರಿಷ್ಕರಿಸದಿರುವುದನ್ನೇಆಧಾರವಾಗಿಟ್ಟುಕೊಂಡು ಶೇ.15ರಷ್ಟು ಆಸ್ತಿ ತೆರಿಗೆ ಏರಿಕೆ ಮಾಡಲು ತೆರಿಗೆ ಮತ್ತುಹಣಕಾಸು ಸ್ಥಾಯಿ ಸಮಿತಿ ತೀರ್ಮಾನಿಸಿದೆ.

ಇದಕ್ಕೆ ಜ.28ರಂದು ನಡೆಯುವ ಬಿಬಿಎಂಪಿಕೌನ್ಸಿಲ್ ಸಭೆಯಲ್ಲಿ ಅನುಮೋದನೆ ಪಡೆಯುವುದಕ್ಕೂ ಸಮಿತಿ ಮುಂದಾಗಿದೆ. ಇದಕ್ಕೇನಾದರೂಕೌನ್ಸಿಲ್ ಒಪ್ಪಿಗೆ ಸಿಕ್ಕರೆ ಏಪ್ರಿಲ್ 1ರಿಂದ ಹೊಸ ತೆರಿಗೆ ಜಾರಿಯಾಗಲಿದ್ದು, ಈಗಿನತೆರಿಗೆಗಿಂತ ಶೇ.15ರಷ್ಟು ಹೆಚ್ಚು ತೆರಿಗೆ ಪಾವತಿಸಬೇಕಾಗುತ್ತದೆ.

ಆದರೆ, ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದಿಂದ ಏನಾದರೂ ಒತ್ತಡ ಬಂದರೆ ಈಪ್ರಸ್ತಾಪವನ್ನು ಬಿಬಿಎಂಪಿ ವಾಪಸ್ ತೆಗೆದುಕೊಳ್ಳುವ ಸಾಧ್ಯತೆಯೂ ಇದೆ.

ಬಿಬಿಎಂಪಿಖಜಾನೆಯಲ್ಲಿ ಕಾಸಿಲ್ಲ. ಇದಕ್ಕಾಗಿ ಬೆಲೆ ಬಾಳುವ ಕಟ್ಟಡಗಳನ್ನು ಅಡಮಾನ ಇಡಲು ಬಿಬಿಎಂಪಿಮುಂದಾಗಿತ್ತು. ಆದರೆ ಇದಕ್ಕೆ ಸರ್ಕಾರದ ಅನುಮತಿ ಸಿಗದ ಕಾರಣ ಈಗ ಅನ್ಯ ದಾರಿಹುಡುಕಲಾರಂಭಿಸಿದೆ. ಹೀಗಾಗಿ ತೆರಿಗೆ ಪರಿಷ್ಕರಣೆಗೆ ಕೈಹಾಕಿದೆ.

ಕೆಎಂಸಿಕಾಯ್ದೆ ಪ್ರಕಾರ ಬಿಬಿಎಂಪಿ ಪ್ರತಿ 3 ವರ್ಷಗಳಿಗೊಮ್ಮೆ ಶೇ.15ರಿಂದ ಶೇ.30ರ ವರೆಗೂತೆರಿಗೆ ಏರಿಕೆ ಮಾಡಲು ಅವಕಾಶವಿದೆ. ಇದರಂತೆ 2011ರಲ್ಲಿ ಮತ್ತೆ ತೆರಿಗೆಪರಿಷ್ಕರಿಸಬೇಕಿತ್ತು. ಕಾರಣಾಂತರಿಂದ ಆಗಲಿಲ್ಲ.

ಹೀಗೇಕೆ ಮಾಡಲಿಲ್ಲ?:  ಬಿಜೆಪಿಸದಸ್ಯ ಎನ್.ಆರ್. ರಮೇಶ್ ಕಳೆದ ಎರಡು ವರ್ಷಗಳಿಂದಲೂ ಬಿಬಿಎಂಪಿ ಆದಾಯ ಮೂಲ ಹೆಚ್ಚಿಸುವಸುಮಾರು 10ಕ್ಕೂ ಹೆಚ್ಚಿನ ಸಲಹೆಗಳನ್ನು ದಾಖಲೆ ಸಹಿತ ನೀಡಿದ್ದಾರೆ. ಇವುಗಳಿಂದಹೇಗೆಲ್ಲಾ ತೆರಿಗೆ ಸಂಗ್ರಹಿಸಬಹುದು ಎಂಬ ತಂತ್ರವನ್ನೂ ಕೌನ್ಸಿಲ್ ಸಭೆಗಳಲ್ಲೇಹೇಳಿದ್ದಾರೆ. ಈ ಮೂಲಗಳಿಂದ ಬಿಬಿಎಂಪಿ ಸುಮಾರು 5000ಕೋಟಿ ವರೆಗೂ ಆದಾಯಸಂಗ್ರಹಿಸಬಹುದಿತ್ತು. ಆದರೆ ರಮೇಶ್ ಹೇಳಿದ್ದರಲ್ಲಿ ಟೆಕ್ಪಾರ್ಕ್, ಪಿ.ಜಿ. ಹಾಸ್ಟೆಲ್ಮತ್ತು ಆಪಾರ್ಟ್ಮೆಂಟ್ಗಳಿಂದ ತೆರಿಗೆ ಸಂಗ್ರಹಕ್ಕೆ ಕೊಂಚ ಯತ್ನಿಸಿರುವುದನ್ನು ಬಿಟ್ಟರೆಉಳಿದ ಮೂಲಗಳ ಕಡೆ ಗಮನ ನೀಡಲಿಲ್ಲ.

  ಆದಾಯ ಮೂಲಗಳು                                       ನಿರೀಕ್ಷಿತ ಆದಾಯ(ಕೋಟಿಗಳಲ್ಲಿ)           

ಓಎಫ್ಸಿ ಕೇಬಲ್ ನೆಲಬಾಡಿಗೆ                                1500

22,000 ಅಪಾರ್ಟ್ಮೆಂಟ್ಗಳು                                   1500

1.10 ಲಕ್ಷ ಕೈಗಾರಿಕಾ ಕಟ್ಟಡಗಳು                            600

8000 ಪಿ.ಜಿ.ಹಾಸ್ಟೆಲ್ಗಳು                                          90

891 ಕಲ್ಯಾಣಮಂಟಪ, 1200ಪಾರ್ಟಿ ಹಾಲ್ಗಳು        1200

2446 ಆಸ್ಪತ್ರೆಗಳು, ಡಯೋಗ್ನಿಸ್ಟಿಕ್ ಸೆಂಟರ್ಗಳು       150

107 ಮಾಲ್ ಮತ್ತು ಮಲ್ಟಿಪ್ಲೆಕ್ಸ್ಗಳು                          180

53 ಟೆಕ್ ಪಾರ್ಕ್ಗಳು                                             500

441 ಸ್ಟಾರ್ ಹೊಟೇಲ್, 2450ಲಾಡ್ಜ್ಗಳು                250

12,850 ಟೆಲಿಕಾಮ್ ಟವರ್ಗಳು                           150

ನಾವುಪಾಲಿಕೆಗೆ ನೀಡುವ ಮಾಹಿತಿ ಮತ್ತು ದಾಖಲೆಗಳನ್ನಾಧರಿಸಿ ಕಂದಾಯಾಧಿಕಾರಿಗಳು ತೆರಿಗೆವಸೂಲಿಗೆ ನಿಂತರೆ ಕನಿಷ್ಠ 4,500ಕೋಟಿಗೂ ಹೆಚ್ಚಿನ ಆದಾಯ ಕ್ರೋಢೀಕರಿಸಬಹುದು. ಇದನ್ನುಬಿಬಿಎಂಪಿ ಆಡಳಿತ ಅಧಿಕಾರಿಗಳಿಂದ ಮಾಡಿಸಬೇಕು. ಇದನ್ನು ಬಿಟ್ಟು ತೆರಿಗೆ ಏರಿಕೆ ಮಾಡಿಜನತೆಗೆ ಹೊರೆ ಹೇರುವುದು ಸರಿಯಲ್ಲ.

ಟಿ ಎನ್.ಆರ್.ರಮೇಶ್, ಬಿಜೆಪಿ ಕಾರ್ಪೋರೇಟರ್

ಬಿಬಿಎಂಪಿಯಲ್ಲಿಕಳೆದ 15ವರ್ಷಗಳಿಂದ ತೆರಿಗೆ ಪರಿಷ್ಕರಣೆ ವೈಜ್ಞಾನಿಕ ರೀತಿಯಲ್ಲಿ ಆಗಿಲ್ಲ. ಆದ್ದರಿಂದಕೆಎಂಸಿ ಕಾಯ್ದೆ ಪ್ರಕಾರ ಈ ಬಾರಿ ತೆರಿಗೆ ಪರಿಷ್ಕರಣೆ ಮಾಡಲು ಪ್ರಸ್ತಾಪಿಸಲಾಗಿದೆ.ಇದರಿಂದ ಬಿಬಿಎಂಪಿ ನೀಡು ವ ಸೌಲಭ್ಯ ಮತ್ತು ಸೇವೆಗಳನ್ನು ಹೆಚ್ಚಿಸುವುದಕ್ಕೂಅನುಕೂಲವಾಗಲಿದೆ.

ಟಿ ಎಂ.ಎಸ್. ಶಿವಪ್ರಸಾದ್,

ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ

 

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s